Sunday, February 14, 2010

ನಾವು ಹೋದೆವು ಅಬ್ಬೂರಿಗೆ ಒಂದು ದಿನ :)


ಜಸ್ಟ್ ಮಾತ್ ಮಾತಲ್ಲಿ ಶುರುವಾಯಿತು ಪಯಣ,
ಕಾಮತ್ ಹೋಟೆಲ್ ಬಂದೊಡನೆ ನಿಂತಿತು ಗಡಿಯ ಚಲನ,
ಜನಪದ ಲೋಕದ ಸೌಂದರ್ಯ ಸವಿಯುತ ಈ ದಿನ,
ಭಾರಿಸಿದೆವು ಬಿಸಿ ಬಿಸಿ ಮುದ್ದೆ ಕಡುಬಿನ ಭೋಜನ,

ಬಿಸಿ ಬಿಸಿ ಕಾಫಿಯೊಂದಿಗೆ ಮತ್ತೆ ಶುರುವಾಯಿತು ಪಯಣ,
ರಾಮನಗರದ ಮೂಲಕ ತಲುಪಿದೆವು ಚನ್ನಪಟ್ಟಣ,
ಮೀಸೆ ಹೊತ್ತ ಪೋಲಿಸ್ ಮಾಮ ತೋರಿಸಿದ ಅಬ್ಬೂರಿನ ದಾರಿನ,
ತಿರುಗುಸಿದ ಡ್ರೈವರ್ ಅಬ್ಬೂರ್ ಕಡೆಗೆ ಗಾಡಿನ,

ಚನ್ನಪಟ್ಟಣದ ಕೆರೆಯ ಸೌಂದರ್ಯವನ್ನು ಕಂಡಿತು ನಮ್ಮ ನಯನ,
ಅಬ್ಬೂರಿಗೆ ತಲುಪಿದಾಗ ಆಗಿತ್ತು ಮಧ್ಯನ್ನ,
ಚೂರು ತಡ ಮಾಡದೆ ಶುರು ಮಾಡಿದರು ಅಚಾರ್ರು ಪೂಜೆನ,
ನಾವು ಕೂಡ ತಡಮಾಡದೆ ಸಲ್ಲಿಸಿದೆವು ಗುರುಗಳಿಗೆ ಮನಃಪೂರ್ವಕ ನಮನ,

ತಟ್ ಅಂತ ಶುರು ಮಾಡಿದ್ರು ನೋಡಿ ಊಟಕ್ಕೆ ಎಲೆ ಹಾಕೋದನ್ನ,
ನಾವು ಬಿಟ್ಟೆವ?...ಟಣ್ ಅಂತ ಕೂತ್ವಿ ಬಾರಿಸೋಕೆ ಶ್ರೀ ಮಠದ ಬಿಸಿ ಬಿಸಿ ಭೋಜನ,
ಊಟದ ನಂತರ ಮತ್ತೆ ಶುರು ಆಯಿತು ಪಯಣ,
ದಾರಿಯಲ್ಲಿ ಆಯಿತು ಮಳೂರ್ ನವನೀತ ಕೃಷ್ಣನ ದರುಶನ,

ಹೊರಟೆವು ಬೆಂಗಳೊರಿನ ಕಡೆಗೆ ಸಲ್ಲಿಸಿ ಅಪ್ರಮೇಯನಿಗೆ ನಮನ,
ಹೊಡೆಯುತ ದಾರಿಯಲ್ಲಿ ಚೆನ್ನಾಗಿ ಗೊರಕೆನ,
ತಲುಪಿದೆವು ಒಂದು ವರೆ ಗಂಟೆಯಲ್ಲಿ ಕೆಂಗೇರಿ ಮೋರಿನ,
ಹೀಗಿತ್ತು ನೋಡಿ ನಮ್ಮ ವ್ಯಾಲೆನ್ಟಾನ್ಸ್ ದೇ ಎಂಬ ಸುದಿನ....

ಬನ್ನಿ ಇನ್ನ್ನೊಮ್ಮೆ ಹೋಗೋಣ ಅಬ್ಬೂರಿಗೆ ನಾವೆಲ್ಲ ಒಂದು ದಿನ :)

ಜೈ ಶ್ರೀ ರಾಮ್

Search This Blog