Monday, August 24, 2009

ಅತಿತಿ ಹಾಗು ಅವರಿಗೆ ನಾವು ಸಲ್ಲಿಸುವ ಆತಿತ್ಯ

ಈ ವಿಚಾರದ ಬಗ್ಗೆ ಚಿಂತನೆ ಮುಂದಿನ ವಾರ ಅಂತ ಬರೆದದ್ದು ನಿಜ .....ಆ ಮುಂದಿನ ವಾರ ಈಗ ಬಂದಿದೆ... :)

ಪೂಜಾ ಪದ್ದತಿ ಹಾಗು hospitality ಬಗ್ಗೆ ತಿಳಿದುಕೊಳ್ಳೋ ಮುಂಚೆ, ಅತಿತಿಯ ಬಗ್ಗೆ ತಿಳಿದುಕೊಳ್ಳೋದು ಬಹುಶಹ ಮುಖ್ಯ ಅಂತ ಕಾಣಬಹುದಲ್ವೆ? .... ಅದಕ್ಕೆ ಅತಿತಿಗಳು ಹಾಗು ಅವರಿಗೆ ನಾವು ಸಲ್ಲಿಸುವ ಆತಿತ್ಯದ ಬಗ್ಗೆ ಸ್ವಲ್ಪ ಚಿಂತನೆ ಮಾಡೋಣ....  ಏನ್ ಅಂತಿರಿ?

       ಬಹುಪಾಲು ನಮ್ಮ ತಂದೆ ತಾಯಿಯರು ಹೇಳಿಕೊಟ್ಟ ಮೊದಲನೇ ಕೆಲವು ಪಟಗಳಲ್ಲಿ ಒಂದು.....'ಅತಿತಿ ದೇವೋ ಭವ'......ಅಲ್ಲವೆ? ಈ ಮಾತಿನಿಂದ ನಮಗೆ ತಿಳಿದಿರೋದು, ಮನೆಗೆ ಅತಿತಿಗಳು ಬರ್ತಾರೆ ಅಂದರೆ ದೇವರು ಬಂದ ಹಾಗೆ! ನಿಜ.....ಅಕ್ಷರ ಸಹ ನಿಜ....

ಆದರೆ, ....ನಮ್ಮಲ್ಲಿ ಮುಂಚಿಂದಲೂ ಇದ್ದು, ಇತೀಚಿಗಷ್ಟೇ ಪ್ರಚಲಿತವಾದ ಒಂದು ಅಭ್ಯಾಸ ಇದೆ.....ಮನೆಗೆ ಬಾರೋ ಅತಿತಿಗಳು ಎಷ್ಟು ದೊಡ್ಡವರು ಅಂತ ನೋಡಿ....ನಂತರ ಅದಕ್ಕೆ ತಕ್ಕಂತೆ ನಮ್ಮ ತಯಾರಿ..... ಅಲ್ಲವೆ?

      ನಿಮ್ಮ ತಂದೆ ತಾಯಂದಿರ ಬಾಸ್ ಏನಾದ್ರು ಮನೆಗೆ ಬರ್ತಿದ್ರೆ.....ನೀವ್ ನಿಮ್ಮ ಸಹಜ ಸ್ಥಿತಿಯಲ್ಲಿ ಅವರನ್ನ ಕಾಣಲಿಕ್ಕೆ ನಿಮ್ಮ ತಂದೆ ತಾಯಿ ಬಿಡ್ತಾರ???......ಕಂಡಿತ ಇಲ್ಲ!!! :D ...... ಹಾಗೆ...ವ್ಯಕ್ತಿಯ ಸಾಮಾಜಿಕ ಸ್ಥಾನಮಾನಗಳ ಮೇಲೆ ಆಧಾರಿತವಾಗಿದೆ ನಮ್ಮ ನಿಮ್ಮೆಲ್ಲರ ಆತಿತ್ಯ...

     ಈಗ ಪೂಜೆ ಅನ್ನೋ ಪದದ ಅರ್ಥವನ್ನ ಬಿತ್ತರಿಸೋಣ....ದಿನನಿತ್ಯ ಭಕ್ತಿಯಿಂದ...(ಮನಸ್ಸಿನಲ್ಲಿ ಹಲವಾರು ಆಸೆಗಳನ್ನ ಹೊತ್ತು)......ದೇವರಿಗೆ ಪೂಜೆ ಸಲ್ಲಿಸ್ಥಿರಿ ಅಲ್ವಾ??.....ದೇವರು ಅಂದ್ರೆ ಸಾಮಾನ್ಯವಾಗಿ ಹಿಂದುಗಳಿಗೆ ಮನಸ್ಸಿಗೆ ಬರುವವನೆ ನಮ್ಮ ಕೃಷ್ಣ...:)

ಅವನಿಗೆ ಹಲವಾರು ಹೆಸರು....ಅದರಲ್ಲಿ ವಿಶೇಷವಾಗಿ ನನ್ನ ಮನಸ್ಸೇಳೆದ ಹೆಸರು 'ಅನಂತ'.

ಅನಂತ ....ಅನ್ನೋ ಪದವನ್ನ ಅರ್ಥ ಸಹಿತವಾಗಿ ಬಿತ್ತರಿಸುವ ಪ್ರಯತ್ನ ಮಾಡುವಷ್ಟು ಪಾಂಡಿತ್ಯ ನನ್ನಲಿ ಇಲ್ಲ....

ಕೃಷ್ಣ! ....

ಅನಂತ ರೂಪವನ್ನ ಹೊತ್ತು......ಅನಂತ ಲೋಕಗಳನ್ನು .......ಅನಂತ ಬಣ್ಣಗಳಿಂದ ತುಂಬಿ.....ಅನಂತ ಭಕ್ತರ ....ಅನಂತ ಮನದಲ್ಲಿ.....ಅನಂತ ಚಿಂತನೆಯನ್ನ ತುಂಬಿ ....  ಅನಂತ ರೀತಿಯಾಗಿ.... ಅನಂತ ಸತ್ಕಾರ್ಯಗಳನ್ನು ಮಾಡಿಸುತಿದ್ದಾನೆ.....
ಅನಂತ ಜೀವಕ್ಕೂ..... ಅನಂತ ಭಾವನೆಗಳನ್ನ ತುಂಬಿ..... ಅನಂತವಾಗಿ.....ಅನ್ಥರ್ಯಾಮಿಯಾಗಿ ನಮ್ಮನಿಮೆಲ್ಲರೋಳಗಿದ್ದು ..... ನಮನ್ನ ಅನಂತ ನೆಡೆಗೆ ನಡೆಯಲು ಹುರಿದುಮ್ಬಿಸುತಿದ್ದಾನೆ....

      ಈಗ ನಾವು ನಮನ್ನೇ ಪ್ರಶ್ನಿಸಿಕೊಳ್ಳೋಣ......ಇಂತಹ ಅನಂತನಿಗಿಂತ ......ಅನಂತ ಹಿರಿಮೆಯನ್ನು  ಹೊಂದಿರ್ತಕ್ಕಂತ ಅತಿತಿ ನಿಮಗೆ ಎಲ್ಲಾದರೂ ಸಿಗುವ ಸಾಧ್ಯತೆ ಇದೆಯೇ???    ಇಂತಹ ಒಬ್ಬ ಅತಿತಿ  ನಿಮ್ಮ ಮನೆಗೆ ಬರುತ್ತಾನೆ ಅಂದ್ರೆ.....ನಿಮ್ಮ ಆತಿತ್ಯ ಏಷ್ಟು ಹಿರಿದಾಗಿರಬೇಕು ಅಂತ ನೀವೇ ಯೋಚನೆ ಮಾಡಿ.....

    ಇಂತಹ ವಿಶೇಷ ಅತಿತಿಯ .....ವಿಶೇಷ ಸಾನ್ನಿಧ್ಯವನ್ನ.....ವಿಶೇಷವಾಗಿ ಅನುಭವಿಸೋಕೆ ಅಂತಾನೆ.....ನಮ್ಮ ಹಿರೀಕರು.....ಹಬ್ಬ ಹರಿದಿನಗಳನ್ನ ಗುರುತಿಸಿರೋದು....

     ಪುರುಷೋತ್ತಮನಿಗೆ ...... ಉತ್ತಮ್ಮ ಸೇವೆ ಸಲ್ಲಿಸುವ ಸಲುವಾಗಿ....ಉತ್ತಮ ಯೋಗ.... ಉತ್ತಮ ಕರಣ......ಉತ್ತಮ ದಿನದಂದು.......ಉತ್ತಮ ಪದಾರ್ಥಗಳೊಂದಿಗೆ....ಉತ್ತಮ ಸಿದ್ದತೆಯೊಂದಿಗೆ ..... ಅನಂತನನ್ನ ಅನಂತ ಸಂತಸದಿಂದ ಬರಮಾಡಿಕೊಳ್ಳುವ ದಿನಗಳನ್ನೇ ಹಬ್ಬ ಹರಿದಿನ ಎಂದು ಗುರುತಿಸಿರೋದು ....

ಜೈ ಶ್ರೀ ರಾಮ್

Sunday, August 23, 2009

ಭಾವ ದ್ವೀಪ - ಭಾವನೆಗಳ ಸಿರಿಮನೆ

ಭಾವ ದ್ವೀಪ ....... ನನ್ನ ಭಾವನೆಗಳಿಗೆ ನೆಲೆ ಕೊಡಲು ಭಗವಂತ ಒದಗಿಸಿರುವ ಏಕೈಕ ದ್ವೀಪ ಈ ಜೀವನ.....ಕ್ಷಣ ಮಾತ್ರದಲ್ಲೇ ಹೊಳೆದ ಈ ಹೆಸರಿಗೆ ಕಾರಣ ಹಲವು.... ಆದರೆ ಅವುಗಳಲ್ಲಿ ಮುಖ್ಯವಾದವು.......ಪ್ರೀತಿ ಮತ್ತು ಸ್ನೇಹ .... ಸ್ಥೂಲ ದೃಷ್ಟಿಗೆ ಪ್ರೀತಿ ಸ್ನೇಹದಂತೆ.....ಸ್ನೇಹ ಪ್ರೀತಿಯಂತೆ ಕಂಡರೂ.....ಒಂದೇ ಅಲ್ಲ ಎಂಬುದು ನನ್ನ ಭಾವನೆ.....

ಸ್ನೇಹ ಅನ್ನೋದು ಈ ದ್ವೀಪಕ್ಕೆ ಆಗಾಗ ಬಂದು ಹೋಗೋ ದೋಣಿ ಇದ್ದ ಹಾಗೆ..... ನಮ್ಮ ಸ್ನೇಹಿತರು....ಈ ದೋಣಿ ಉಪ್ಯೋಗ್ಸೋ ಬೆಸ್ತರಿದ್ದ ಹಾಗೆ....ಪ್ರೀತಿ ಅನ್ನೋದು......ದ್ವೀಪದಲ್ಲಿ ಹರಡಿರೋ ಮರಳಿದ್ದ ಹಾಗೆ.....ಸ್ನೇಹ ಬಂದು ಬಂದು ಹೋಗ ಬಹುದು......ಆದ್ರೆ ಪ್ರೀತಿ ಒಂದು ಸರ್ತಿ ಬಂದ್ರೆ ಮತ್ತೆ ಹೋಗಲ್ಲ....

ಈ ಜೀವನವನ್ನ ದ್ವೀಪ ಅಂತ ಕರ್ಯೋಕೆ ಕಾರಣ ಏನ್ ಗೊತ್ತ???..... ನಮಗೆ ಜೀವನದಲ್ಲಿ ಸುಮಾರ್ ಜನ ಹತ್ರ ಆಗ್ತಾರೆ.....ಅಲ್ವಾ????.....ಆದ್ರೆ....ನಿಜವಾಗಲು ಹತ್ರ ಆಗೌರು ಎಷ್ಟು ಜನ???....ಬೆರಳೆಣಿಕೆ ಅಷ್ಟು ಮಾತ್ರ ಅಲ್ವಾ?
ಮುಂಚಿನ ಕಾಲದಲ್ಲೂ ಹೀಗೆ......ದ್ವೀಪ ಸೇರೋಕೆ....ತುಂಬ ಜನ ಪ್ರಯತ್ನ ಪಡೌರು.....ಆದ್ರೆ ಸೇರ್ತಿದ್ದೌರು....ಬೆರಳೆಣಿಕೆಯಷ್ಟು ಮಾತ್ರ...
ಸ್ನೇಹ ಅನ್ನೋ ದೋಣಿ ಹತ್ತಿ......ಭಾವನೆ ಆನೋ ಹರಿಗೋಲ್ ಹಿಡಿದು ....... ಮನಸ್ಸಿಗೆ ಹತ್ರ ಅಗೌರ್ ಅಷ್ಟೆ ಸ್ನೇಹಿತರು.... ಮಿಕ್ಕಿದವರೆಲ್ಲ ಸಮಯ ಸಾಧಕರು... :) ..ಏನ್ ಅಂತೀರಿ?..... ನಿಜ ಅಲ್ವಾ?......
ಪ್ರೀತಿ ಕೂಡ ಒಂದು ರೀತಿ ಹೀಗೆ.......ಒಂದು ದ್ವೀಪದ ಮೇಲೆ,....ಹಲವಾರು ರೀತಿಯ ಮರಳು ಇರುತ್ತೆ......ಜೀವನದಲ್ಲಿ ಕೂಡ ಹಾಗೆ....ಹಲವಾರು ರೀತಿ ಪ್ರೀತಿಯಾ ರೂಪಗಳು ......ಅಮ್ಮನ ಪ್ರೀತಿ....ಅಪ್ಪನ ಪ್ರೀತಿ......ತಂಗಿಯ ಪ್ರೀತಿ.....ಹೆಂಡತಿಯ ಪ್ರೀತಿ....ಸ್ನೇಹಿತರ ಪ್ರೀತಿ.....ಹೀಗೆ ..... ಹಲವಾರು...... :)..... ಆದ್ರೆ ಎಲ್ಲವು ಬೇರೆ ಬೇರೆ ಮುಕಗಲ್ಲನ್ನು ಹೊತ್ತಿರುವ ಒಂದೇ ಪ್ರೀತಿ.... ಪ್ರೀತಿಗೆ ಚೈತನ್ಯ ತರತಕ್ಕಂತ ವಸ್ತುವೇ ಭಾವ.....
.......ಭಾವವಿರದ ಬದುಕು.....ಬಣ್ಣವಿಲ್ಲದ ಲೋಕವಿದ್ದ ಹಾಗೆ ......... ಊಹಿಸೋದು ಕಷ್ಟ ಅಲ್ವಾ?......
so......the communication between the land of unkown and a known island of life, is through the boats of friendship and the words of wisdom.........
Many islands can be brought together through the sand of love...... This land formed out of many islands can be a primary source of shelter to many unkonwn orphan islands.......
'ಹಡಗು ನಿನ್ನದೇ ಕಡಲು ನಿನ್ನದೇ ಮುಳುಗದಿರಲಿ ಬದುಕು'........' ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು'
ಮೈಸೂರು ಮಲ್ಲಿಗೆಯ ಈ ಮಾತು .... ಹೊರ ನೋಟಕ್ಕೆ ಎಷ್ಟು ಸರಳವೋ....ಒಳ ನೋಟಕ್ಕೆ....ಅಷ್ಟೆ ಭಾವಪೂರ್ವಕ ....
ಪ್ರೀತಿ ಮತ್ತು ಸ್ನೇಹವೆಂಬ ಎರಡು ಅಪೂರ್ವ ಮುತ್ತುಗಳನ್ನ ....ಕಾಪಾಡಿಕೊಳ್ಳಿ......ಬದುಕನ್ನು ಭಾವಪೂರ್ವಕವಾಗಿರಿಸಿ....
ಇದು ನನ್ನ ವಯಕ್ತಿಕ ಪ್ರಾರ್ತನೆ.... :)

Search This Blog