Sunday, August 23, 2009

ಭಾವ ದ್ವೀಪ - ಭಾವನೆಗಳ ಸಿರಿಮನೆ

ಭಾವ ದ್ವೀಪ ....... ನನ್ನ ಭಾವನೆಗಳಿಗೆ ನೆಲೆ ಕೊಡಲು ಭಗವಂತ ಒದಗಿಸಿರುವ ಏಕೈಕ ದ್ವೀಪ ಈ ಜೀವನ.....ಕ್ಷಣ ಮಾತ್ರದಲ್ಲೇ ಹೊಳೆದ ಈ ಹೆಸರಿಗೆ ಕಾರಣ ಹಲವು.... ಆದರೆ ಅವುಗಳಲ್ಲಿ ಮುಖ್ಯವಾದವು.......ಪ್ರೀತಿ ಮತ್ತು ಸ್ನೇಹ .... ಸ್ಥೂಲ ದೃಷ್ಟಿಗೆ ಪ್ರೀತಿ ಸ್ನೇಹದಂತೆ.....ಸ್ನೇಹ ಪ್ರೀತಿಯಂತೆ ಕಂಡರೂ.....ಒಂದೇ ಅಲ್ಲ ಎಂಬುದು ನನ್ನ ಭಾವನೆ.....

ಸ್ನೇಹ ಅನ್ನೋದು ಈ ದ್ವೀಪಕ್ಕೆ ಆಗಾಗ ಬಂದು ಹೋಗೋ ದೋಣಿ ಇದ್ದ ಹಾಗೆ..... ನಮ್ಮ ಸ್ನೇಹಿತರು....ಈ ದೋಣಿ ಉಪ್ಯೋಗ್ಸೋ ಬೆಸ್ತರಿದ್ದ ಹಾಗೆ....ಪ್ರೀತಿ ಅನ್ನೋದು......ದ್ವೀಪದಲ್ಲಿ ಹರಡಿರೋ ಮರಳಿದ್ದ ಹಾಗೆ.....ಸ್ನೇಹ ಬಂದು ಬಂದು ಹೋಗ ಬಹುದು......ಆದ್ರೆ ಪ್ರೀತಿ ಒಂದು ಸರ್ತಿ ಬಂದ್ರೆ ಮತ್ತೆ ಹೋಗಲ್ಲ....

ಈ ಜೀವನವನ್ನ ದ್ವೀಪ ಅಂತ ಕರ್ಯೋಕೆ ಕಾರಣ ಏನ್ ಗೊತ್ತ???..... ನಮಗೆ ಜೀವನದಲ್ಲಿ ಸುಮಾರ್ ಜನ ಹತ್ರ ಆಗ್ತಾರೆ.....ಅಲ್ವಾ????.....ಆದ್ರೆ....ನಿಜವಾಗಲು ಹತ್ರ ಆಗೌರು ಎಷ್ಟು ಜನ???....ಬೆರಳೆಣಿಕೆ ಅಷ್ಟು ಮಾತ್ರ ಅಲ್ವಾ?
ಮುಂಚಿನ ಕಾಲದಲ್ಲೂ ಹೀಗೆ......ದ್ವೀಪ ಸೇರೋಕೆ....ತುಂಬ ಜನ ಪ್ರಯತ್ನ ಪಡೌರು.....ಆದ್ರೆ ಸೇರ್ತಿದ್ದೌರು....ಬೆರಳೆಣಿಕೆಯಷ್ಟು ಮಾತ್ರ...
ಸ್ನೇಹ ಅನ್ನೋ ದೋಣಿ ಹತ್ತಿ......ಭಾವನೆ ಆನೋ ಹರಿಗೋಲ್ ಹಿಡಿದು ....... ಮನಸ್ಸಿಗೆ ಹತ್ರ ಅಗೌರ್ ಅಷ್ಟೆ ಸ್ನೇಹಿತರು.... ಮಿಕ್ಕಿದವರೆಲ್ಲ ಸಮಯ ಸಾಧಕರು... :) ..ಏನ್ ಅಂತೀರಿ?..... ನಿಜ ಅಲ್ವಾ?......
ಪ್ರೀತಿ ಕೂಡ ಒಂದು ರೀತಿ ಹೀಗೆ.......ಒಂದು ದ್ವೀಪದ ಮೇಲೆ,....ಹಲವಾರು ರೀತಿಯ ಮರಳು ಇರುತ್ತೆ......ಜೀವನದಲ್ಲಿ ಕೂಡ ಹಾಗೆ....ಹಲವಾರು ರೀತಿ ಪ್ರೀತಿಯಾ ರೂಪಗಳು ......ಅಮ್ಮನ ಪ್ರೀತಿ....ಅಪ್ಪನ ಪ್ರೀತಿ......ತಂಗಿಯ ಪ್ರೀತಿ.....ಹೆಂಡತಿಯ ಪ್ರೀತಿ....ಸ್ನೇಹಿತರ ಪ್ರೀತಿ.....ಹೀಗೆ ..... ಹಲವಾರು...... :)..... ಆದ್ರೆ ಎಲ್ಲವು ಬೇರೆ ಬೇರೆ ಮುಕಗಲ್ಲನ್ನು ಹೊತ್ತಿರುವ ಒಂದೇ ಪ್ರೀತಿ.... ಪ್ರೀತಿಗೆ ಚೈತನ್ಯ ತರತಕ್ಕಂತ ವಸ್ತುವೇ ಭಾವ.....
.......ಭಾವವಿರದ ಬದುಕು.....ಬಣ್ಣವಿಲ್ಲದ ಲೋಕವಿದ್ದ ಹಾಗೆ ......... ಊಹಿಸೋದು ಕಷ್ಟ ಅಲ್ವಾ?......
so......the communication between the land of unkown and a known island of life, is through the boats of friendship and the words of wisdom.........
Many islands can be brought together through the sand of love...... This land formed out of many islands can be a primary source of shelter to many unkonwn orphan islands.......
'ಹಡಗು ನಿನ್ನದೇ ಕಡಲು ನಿನ್ನದೇ ಮುಳುಗದಿರಲಿ ಬದುಕು'........' ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು'
ಮೈಸೂರು ಮಲ್ಲಿಗೆಯ ಈ ಮಾತು .... ಹೊರ ನೋಟಕ್ಕೆ ಎಷ್ಟು ಸರಳವೋ....ಒಳ ನೋಟಕ್ಕೆ....ಅಷ್ಟೆ ಭಾವಪೂರ್ವಕ ....
ಪ್ರೀತಿ ಮತ್ತು ಸ್ನೇಹವೆಂಬ ಎರಡು ಅಪೂರ್ವ ಮುತ್ತುಗಳನ್ನ ....ಕಾಪಾಡಿಕೊಳ್ಳಿ......ಬದುಕನ್ನು ಭಾವಪೂರ್ವಕವಾಗಿರಿಸಿ....
ಇದು ನನ್ನ ವಯಕ್ತಿಕ ಪ್ರಾರ್ತನೆ.... :)

2 comments:

  1. To add to your blog ........ love is more enchanting when you find a friend in it...It ismore exciting than finding love in a friend.
    If a person you love turns out to be your friend , you match in many ways, thoughts and likings and pretty much think alike that enhances the friendship even more and love flows like the rhythm of ocean waves in a calm wind.
    Otherwise the waves splash so hard against the rocks that you can hear the roar in yourself and hence find no peace. :)

    ReplyDelete
  2. Nimma baraha bahala sundaravagiyu , arthapoornavaagiyu moodi bandide.
    Neevu "Vishesha chihne" galannu vaakyagalu haagu aa sandarbhakke anugunavaagi balasiddare,adannu odi grahisikollalu odugarige sulabhavagbahudu yendu nanna vaiyukthika abhipraaya.

    ReplyDelete

ನಿಮ್ಮ ಅನಿಸಿಕೆಗಳು, ಈ blog ಅಭಿವೃದ್ಧಿಗೆ ಬಹಳ ಅತ್ಯಗತ್ಯ .....ತಿಳುವಳಿಕೆಯ ಮಾತಾಗಲಿ..... ಮೆಚ್ಚುಗೆಯ ಮಾತಾಗಲಿ.... ಬಿಚ್ಚುಹೃದಯದಿಂದ.....ಗರ್ಜಿಸಿ ಹೇಳಿ.... :)

Search This Blog