Sunday, February 6, 2011

ಕನಕ ದಾಸರ, ನರಸಿಂಹ ದೇವರ ಉಗ್ರಾವತಾರದ ಚಿಂತನೆ


ಕಂಡೆನಾ ತಂಡ ತಂಡದ ಹಿಂಡು ದೈವ ಪ್ರಚಂಡ ರಿಪುಗಂಡ ಉದ್ಧಂಡ ನರಸಿಂಹನ

ಘುಡು-ಘುಡಿಸಿ ಕಂಭದಲಿ ಧಡ-ಧಡ ಸಿಡಿಲು ಸಿಡಿಯೆ
ಹಿಡಿ-ಹಿಡಿಸೆ ನುಡಿಯಡದಲೊಡನೆ ಮುಡಿವಿಡಿದು
ಘಡ-ಘಡನೆ ನಡು ನಡುಗೆ ಘುಡು-ಘುಡಿಸಿ ಸಭೆ ಭೆಧರೆ
ಹಿಡಿ-ಹಿಡಿದು ಹಿರಣ್ಯಕನ ತೊಡೆಯಲ್ಲಿ ಕೆಡಗಿದನ

ಕಂಡೆನಾ ತಂಡ-ತಂಡದ ಹಿಂಡು ದೈವ ಪ್ರಚಂಡ ರಿಪುಗಂಡ ಉದ್ಧಂಡ ನರಸಿಂಹನ

ಪುರದೊಳಪ್ಪಳಿಸಿ ಅರಿ ಶಿರವ ಸರ-ಸರ ಸೀಳಿ
ಪರಿ-ಪರಿಯಲಿ ಚರ್ಮ ಎಳೆದೆಳೆದು ಎಲುಬು ನರ
ನರವನ್ನು ತೆಗೆದು ನಿರ್ಗತಿತ ಶೋಣಿತ ಸುರಿಯೆ
ಹರಿ-ಹರಿದು ಕರುಳ ಕೊರಳೊಳಗೆ ಇಟ್ಟವನ

ಕಂಡೆನಾ ತಂಡ ತಂಡದ ಹಿಂಡು ದೈವ ಪ್ರಚಂಡ ರಿಪುಗಂಡ ಉದ್ಧಂಡ ನರಸಿಂಹನ

ಪುರ ಜನರು ಹಾ ಎನಲು ಸುರರು ಹೂಮಳೆ ಗರೆಯೇ ತರ-ತರದ ವಾದ್ಯ ಸಂಭ್ರಮಗಳಿಂದ
ಹರಿ-ಹರಿಯೇ ಶರಣೆಂದು ಶ್ರುತಿಸಿ ಶಿಶು ಮೊರೆಯಿಡುವ ಕರುಣಾಳು ಕಾಗಿನೆಲೆ ಆದಿಕೇಶವನ

ಕಂಡೆನಾ ತಂಡ ತಂಡದ ಹಿಂಡು ದೈವ ಪ್ರಚಂಡ ರಿಪುಗಂಡ ಉದ್ಧಂಡ ನರಸಿಂಹನ

No comments:

Post a Comment

ನಿಮ್ಮ ಅನಿಸಿಕೆಗಳು, ಈ blog ಅಭಿವೃದ್ಧಿಗೆ ಬಹಳ ಅತ್ಯಗತ್ಯ .....ತಿಳುವಳಿಕೆಯ ಮಾತಾಗಲಿ..... ಮೆಚ್ಚುಗೆಯ ಮಾತಾಗಲಿ.... ಬಿಚ್ಚುಹೃದಯದಿಂದ.....ಗರ್ಜಿಸಿ ಹೇಳಿ.... :)

Search This Blog