Thursday, April 12, 2012

ಪರವಶನಾದೆನು.... ಅರಿಯುವ ಮುನ್ನವೇ.... :)

ಪರವಶನಾದೆನು.... ಅರಿಯುವ ಮುನ್ನವೇ....
ಪರಿಚಿತನಾಗಲಿ ಹೇಗೆ.... ಪ್ರಣಯಕುಮುನ್ನವೇ....
ಇದಕಿಂತ ಬೇಗ ಇನ್ನು.... ಸಿಗ ಬಾರದಿತ್ತೆ ನೀನು.....
ಇನ್ನಾದರೂ ಕಾದಿಟ್ಟುಕೋ.... ನೀ ನನ್ನನು..... ಕಳೆಯುವ ಮುನ್ನವೇ..... :)

ನಿನ್ನ ಕಣ್ಣಿಗಂತೂ ನಾನು ನಿರುಪಯೋಗಿ ಈಗಲೂ.....
ಇನ್ನು ಬೇರೆ ಏನು ಬೇಕು..... ಪ್ರೇಮ ಯೋಗಿ ಆಗಲು.....
ಹೂ ಅರಳುವ ಸದ್ದನು..... ನಿನ್ನ ನಗೆಯಲ್ಲಿ.... ಕೇಳ ಬಲ್ಲೆ.....
ನನ್ನ ಏಕಾಂತವನ್ನು.... ತಿದ್ದಿ ಕೊಡು ನೀನೀಗ ನಿಂತಲ್ಲೇ.....
ನಾನೇನೆ ಅಂದರೂನು .... ನನಗಿಂತ ಚೂಟಿ ನೀನು.....
ನನಗಾಗಿಯೇ.... ಕಾದಿಟ್ಟುಕೋ... ಮುತ್ತೊಂದನು ಕದಿಯುವ ಮುನ್ನವೇ....

ಕನಸಲಿ ತುಂಬ ಕೆಟ್ಟಿರುವೇನು ನಿನ್ನನ್ನು ಕೇಳದೆ....
ರೆಕ್ಕೆಯ ನೀಲಿ ಕಟ್ಟಿರಲು ಈ ಹೃದಯವು ಹಾರಿದೆ....
ನನ್ನ ಕೌತುಕ ಒಂದೊಂದೇ ಹೇಳಲೇನು ..... ಆಲಿಸುವಾಗ ನೋಡು ನನ್ನನ್ನೇ ಸಾಕು....
ಸಹವಾಸ ದೋಷದಿಂದ..... ಸರಿಯಾಗಬಹುದೇ ನಾನು......
ನನಗಾಗಿಯೇ ಕಾದಿಟ್ಟುಕೋ ಹಟವೊಂದನು..... ಕೆಣಕುವ ಮುನ್ನವೇ.....

ಪರವಶನಾದೆನು.... ಅರಿಯುವ ಮುನ್ನವೇ.... ಪರಿಚಿತನಾಗಲಿ... ಹೇಗೆ? ಪ್ರಣಯಕುಮುನ್ನವೇ .......

Sunday, February 6, 2011

ಕನಕ ದಾಸರ, ನರಸಿಂಹ ದೇವರ ಉಗ್ರಾವತಾರದ ಚಿಂತನೆ


ಕಂಡೆನಾ ತಂಡ ತಂಡದ ಹಿಂಡು ದೈವ ಪ್ರಚಂಡ ರಿಪುಗಂಡ ಉದ್ಧಂಡ ನರಸಿಂಹನ

ಘುಡು-ಘುಡಿಸಿ ಕಂಭದಲಿ ಧಡ-ಧಡ ಸಿಡಿಲು ಸಿಡಿಯೆ
ಹಿಡಿ-ಹಿಡಿಸೆ ನುಡಿಯಡದಲೊಡನೆ ಮುಡಿವಿಡಿದು
ಘಡ-ಘಡನೆ ನಡು ನಡುಗೆ ಘುಡು-ಘುಡಿಸಿ ಸಭೆ ಭೆಧರೆ
ಹಿಡಿ-ಹಿಡಿದು ಹಿರಣ್ಯಕನ ತೊಡೆಯಲ್ಲಿ ಕೆಡಗಿದನ

ಕಂಡೆನಾ ತಂಡ-ತಂಡದ ಹಿಂಡು ದೈವ ಪ್ರಚಂಡ ರಿಪುಗಂಡ ಉದ್ಧಂಡ ನರಸಿಂಹನ

ಪುರದೊಳಪ್ಪಳಿಸಿ ಅರಿ ಶಿರವ ಸರ-ಸರ ಸೀಳಿ
ಪರಿ-ಪರಿಯಲಿ ಚರ್ಮ ಎಳೆದೆಳೆದು ಎಲುಬು ನರ
ನರವನ್ನು ತೆಗೆದು ನಿರ್ಗತಿತ ಶೋಣಿತ ಸುರಿಯೆ
ಹರಿ-ಹರಿದು ಕರುಳ ಕೊರಳೊಳಗೆ ಇಟ್ಟವನ

ಕಂಡೆನಾ ತಂಡ ತಂಡದ ಹಿಂಡು ದೈವ ಪ್ರಚಂಡ ರಿಪುಗಂಡ ಉದ್ಧಂಡ ನರಸಿಂಹನ

ಪುರ ಜನರು ಹಾ ಎನಲು ಸುರರು ಹೂಮಳೆ ಗರೆಯೇ ತರ-ತರದ ವಾದ್ಯ ಸಂಭ್ರಮಗಳಿಂದ
ಹರಿ-ಹರಿಯೇ ಶರಣೆಂದು ಶ್ರುತಿಸಿ ಶಿಶು ಮೊರೆಯಿಡುವ ಕರುಣಾಳು ಕಾಗಿನೆಲೆ ಆದಿಕೇಶವನ

ಕಂಡೆನಾ ತಂಡ ತಂಡದ ಹಿಂಡು ದೈವ ಪ್ರಚಂಡ ರಿಪುಗಂಡ ಉದ್ಧಂಡ ನರಸಿಂಹನ

Sunday, February 14, 2010

ನಾವು ಹೋದೆವು ಅಬ್ಬೂರಿಗೆ ಒಂದು ದಿನ :)


ಜಸ್ಟ್ ಮಾತ್ ಮಾತಲ್ಲಿ ಶುರುವಾಯಿತು ಪಯಣ,
ಕಾಮತ್ ಹೋಟೆಲ್ ಬಂದೊಡನೆ ನಿಂತಿತು ಗಡಿಯ ಚಲನ,
ಜನಪದ ಲೋಕದ ಸೌಂದರ್ಯ ಸವಿಯುತ ಈ ದಿನ,
ಭಾರಿಸಿದೆವು ಬಿಸಿ ಬಿಸಿ ಮುದ್ದೆ ಕಡುಬಿನ ಭೋಜನ,

ಬಿಸಿ ಬಿಸಿ ಕಾಫಿಯೊಂದಿಗೆ ಮತ್ತೆ ಶುರುವಾಯಿತು ಪಯಣ,
ರಾಮನಗರದ ಮೂಲಕ ತಲುಪಿದೆವು ಚನ್ನಪಟ್ಟಣ,
ಮೀಸೆ ಹೊತ್ತ ಪೋಲಿಸ್ ಮಾಮ ತೋರಿಸಿದ ಅಬ್ಬೂರಿನ ದಾರಿನ,
ತಿರುಗುಸಿದ ಡ್ರೈವರ್ ಅಬ್ಬೂರ್ ಕಡೆಗೆ ಗಾಡಿನ,

ಚನ್ನಪಟ್ಟಣದ ಕೆರೆಯ ಸೌಂದರ್ಯವನ್ನು ಕಂಡಿತು ನಮ್ಮ ನಯನ,
ಅಬ್ಬೂರಿಗೆ ತಲುಪಿದಾಗ ಆಗಿತ್ತು ಮಧ್ಯನ್ನ,
ಚೂರು ತಡ ಮಾಡದೆ ಶುರು ಮಾಡಿದರು ಅಚಾರ್ರು ಪೂಜೆನ,
ನಾವು ಕೂಡ ತಡಮಾಡದೆ ಸಲ್ಲಿಸಿದೆವು ಗುರುಗಳಿಗೆ ಮನಃಪೂರ್ವಕ ನಮನ,

ತಟ್ ಅಂತ ಶುರು ಮಾಡಿದ್ರು ನೋಡಿ ಊಟಕ್ಕೆ ಎಲೆ ಹಾಕೋದನ್ನ,
ನಾವು ಬಿಟ್ಟೆವ?...ಟಣ್ ಅಂತ ಕೂತ್ವಿ ಬಾರಿಸೋಕೆ ಶ್ರೀ ಮಠದ ಬಿಸಿ ಬಿಸಿ ಭೋಜನ,
ಊಟದ ನಂತರ ಮತ್ತೆ ಶುರು ಆಯಿತು ಪಯಣ,
ದಾರಿಯಲ್ಲಿ ಆಯಿತು ಮಳೂರ್ ನವನೀತ ಕೃಷ್ಣನ ದರುಶನ,

ಹೊರಟೆವು ಬೆಂಗಳೊರಿನ ಕಡೆಗೆ ಸಲ್ಲಿಸಿ ಅಪ್ರಮೇಯನಿಗೆ ನಮನ,
ಹೊಡೆಯುತ ದಾರಿಯಲ್ಲಿ ಚೆನ್ನಾಗಿ ಗೊರಕೆನ,
ತಲುಪಿದೆವು ಒಂದು ವರೆ ಗಂಟೆಯಲ್ಲಿ ಕೆಂಗೇರಿ ಮೋರಿನ,
ಹೀಗಿತ್ತು ನೋಡಿ ನಮ್ಮ ವ್ಯಾಲೆನ್ಟಾನ್ಸ್ ದೇ ಎಂಬ ಸುದಿನ....

ಬನ್ನಿ ಇನ್ನ್ನೊಮ್ಮೆ ಹೋಗೋಣ ಅಬ್ಬೂರಿಗೆ ನಾವೆಲ್ಲ ಒಂದು ದಿನ :)

ಜೈ ಶ್ರೀ ರಾಮ್

Tuesday, October 20, 2009

ಸರಸ ವಿರಸದ ನಡುವೆ ಸಮರಸದ ಜೀವನ

ತಾಯಿಯ ಪ್ರೀತಿ, ತಂದೆಯ ಅಕ್ಕರೆ, ತಂಗಿಯ ಜೊತೆ ಜಗಳ, ಗೆಳೆಯ ಗೆಳತಿಯಾರೊಡನೆ ಕಾಲಹರಣ ಮತ್ತು ಸಣ್ಣ ಪುಟ್ಟ ಕಲಹಗಳು, ಪ್ರಿಯತಮೆಯ ಜೊತೆ ಸರಸ, ಉದ್ಯೋಗದಲ್ಲಿ ಸಹಕಾರ್ಮಿಕರ ಜೊತೆ ದಿನನಿತ್ಯದ ಒಡನಾಟ......
ಈ ರೀತಿ ಹಲವರು ಸಣ್ಣ ಪುಟ್ಟ ವಿಸ್ಮಯಗಳೊಂದಿಗೆ  ತುಂಬಿದೆ, ಈ ನಮ್ಮ ಜೀವನ.....
....ಸರಸ ವಿರಸದ ನಡುವೆ ಸಮರಸದ ಜೀವನ ಅಂದ್ರೆ ಇದೆ ನಾ???? ಕೆಳಗೆ ಇರುವ ಒಂದು ಸಣ್ಣ ನಿದರ್ಶನ ಓದಿ..... ನಿಮಗೂ ಸಹ ನಿಜ ಅನ್ನಿಸಬಹುದು.... :)
ಜೈ ಶ್ರೀ ರಾಮ್ .....


The Mayonnaise Jar

When things in your life seem
 almost too much to handle,
When 24 Hours in a day is not enough,
Remember the mayonnaise jar and 2 cups of coffee.

A professor stood before his philosophy class
 
And had some  items in  front of him.
When the class began, wordlessly,
He picked up a very large and empty mayonnaise jar
and proceeded to fill it with golf balls.

He then asked the students, if the jar was full.
They agreed that it was.

The professor then picked up a box of pebbles and poured
them into the jar.   He shook the jar lightly.
The pebbles rolled into the open Areas between the golf balls.

He then asked the students again if the jar was full.  They agreed it was.

The professor next picked up a box of sand and poured it into the jar.
Of course, the sand filled up everything else.
He asked once more if the jar was full. The students responded with a unanimous 'yes.'

The professor then produced  two cups of coffee from under the table and poured the entire contents  into the jar, effectively
filling the empty space between the sand.  The students laughed.

'Now,' said the professor,   as the laughter subsided,
'I want you to recognize that this jar represents your life.
The golf balls are the important things - family,
children, health, Loved ones, and Favorite passions –
Things that if everything else was lost and only they remained, Your life would still be full.

The pebbles are the other things that matter like your job, house, and  car.

The sand is everything else --The small stuff.

'If you put the sand into the jar first,'  He continued,
'there is no room for  the pebbles or the golf balls.
The same goes for life.

If you spend all your time and energy on the small stuff,
You will never have room for the things that are important to you.

So...

Pay attention to the things that are critical to your happiness.
Play With your children.
Take time to get medical checkups.
Take your partner out to dinner.

There will always be time to clean the house and fix the disposal.


'Take care of the golf balls first --
The things that really matter.
Set your priorities. The rest is just sand.'

One of the students raised her hand and inquired what the coffee represented.

The professor smiled.
'I'm glad you asked'.

It just goes to show you that no matter how full your life  may seem,
there's always room for a couple of cups of coffee with  a friend.'

Please share this with other "Golf Balls" 

I just did......

Monday, August 24, 2009

ಅತಿತಿ ಹಾಗು ಅವರಿಗೆ ನಾವು ಸಲ್ಲಿಸುವ ಆತಿತ್ಯ

ಈ ವಿಚಾರದ ಬಗ್ಗೆ ಚಿಂತನೆ ಮುಂದಿನ ವಾರ ಅಂತ ಬರೆದದ್ದು ನಿಜ .....ಆ ಮುಂದಿನ ವಾರ ಈಗ ಬಂದಿದೆ... :)

ಪೂಜಾ ಪದ್ದತಿ ಹಾಗು hospitality ಬಗ್ಗೆ ತಿಳಿದುಕೊಳ್ಳೋ ಮುಂಚೆ, ಅತಿತಿಯ ಬಗ್ಗೆ ತಿಳಿದುಕೊಳ್ಳೋದು ಬಹುಶಹ ಮುಖ್ಯ ಅಂತ ಕಾಣಬಹುದಲ್ವೆ? .... ಅದಕ್ಕೆ ಅತಿತಿಗಳು ಹಾಗು ಅವರಿಗೆ ನಾವು ಸಲ್ಲಿಸುವ ಆತಿತ್ಯದ ಬಗ್ಗೆ ಸ್ವಲ್ಪ ಚಿಂತನೆ ಮಾಡೋಣ....  ಏನ್ ಅಂತಿರಿ?

       ಬಹುಪಾಲು ನಮ್ಮ ತಂದೆ ತಾಯಿಯರು ಹೇಳಿಕೊಟ್ಟ ಮೊದಲನೇ ಕೆಲವು ಪಟಗಳಲ್ಲಿ ಒಂದು.....'ಅತಿತಿ ದೇವೋ ಭವ'......ಅಲ್ಲವೆ? ಈ ಮಾತಿನಿಂದ ನಮಗೆ ತಿಳಿದಿರೋದು, ಮನೆಗೆ ಅತಿತಿಗಳು ಬರ್ತಾರೆ ಅಂದರೆ ದೇವರು ಬಂದ ಹಾಗೆ! ನಿಜ.....ಅಕ್ಷರ ಸಹ ನಿಜ....

ಆದರೆ, ....ನಮ್ಮಲ್ಲಿ ಮುಂಚಿಂದಲೂ ಇದ್ದು, ಇತೀಚಿಗಷ್ಟೇ ಪ್ರಚಲಿತವಾದ ಒಂದು ಅಭ್ಯಾಸ ಇದೆ.....ಮನೆಗೆ ಬಾರೋ ಅತಿತಿಗಳು ಎಷ್ಟು ದೊಡ್ಡವರು ಅಂತ ನೋಡಿ....ನಂತರ ಅದಕ್ಕೆ ತಕ್ಕಂತೆ ನಮ್ಮ ತಯಾರಿ..... ಅಲ್ಲವೆ?

      ನಿಮ್ಮ ತಂದೆ ತಾಯಂದಿರ ಬಾಸ್ ಏನಾದ್ರು ಮನೆಗೆ ಬರ್ತಿದ್ರೆ.....ನೀವ್ ನಿಮ್ಮ ಸಹಜ ಸ್ಥಿತಿಯಲ್ಲಿ ಅವರನ್ನ ಕಾಣಲಿಕ್ಕೆ ನಿಮ್ಮ ತಂದೆ ತಾಯಿ ಬಿಡ್ತಾರ???......ಕಂಡಿತ ಇಲ್ಲ!!! :D ...... ಹಾಗೆ...ವ್ಯಕ್ತಿಯ ಸಾಮಾಜಿಕ ಸ್ಥಾನಮಾನಗಳ ಮೇಲೆ ಆಧಾರಿತವಾಗಿದೆ ನಮ್ಮ ನಿಮ್ಮೆಲ್ಲರ ಆತಿತ್ಯ...

     ಈಗ ಪೂಜೆ ಅನ್ನೋ ಪದದ ಅರ್ಥವನ್ನ ಬಿತ್ತರಿಸೋಣ....ದಿನನಿತ್ಯ ಭಕ್ತಿಯಿಂದ...(ಮನಸ್ಸಿನಲ್ಲಿ ಹಲವಾರು ಆಸೆಗಳನ್ನ ಹೊತ್ತು)......ದೇವರಿಗೆ ಪೂಜೆ ಸಲ್ಲಿಸ್ಥಿರಿ ಅಲ್ವಾ??.....ದೇವರು ಅಂದ್ರೆ ಸಾಮಾನ್ಯವಾಗಿ ಹಿಂದುಗಳಿಗೆ ಮನಸ್ಸಿಗೆ ಬರುವವನೆ ನಮ್ಮ ಕೃಷ್ಣ...:)

ಅವನಿಗೆ ಹಲವಾರು ಹೆಸರು....ಅದರಲ್ಲಿ ವಿಶೇಷವಾಗಿ ನನ್ನ ಮನಸ್ಸೇಳೆದ ಹೆಸರು 'ಅನಂತ'.

ಅನಂತ ....ಅನ್ನೋ ಪದವನ್ನ ಅರ್ಥ ಸಹಿತವಾಗಿ ಬಿತ್ತರಿಸುವ ಪ್ರಯತ್ನ ಮಾಡುವಷ್ಟು ಪಾಂಡಿತ್ಯ ನನ್ನಲಿ ಇಲ್ಲ....

ಕೃಷ್ಣ! ....

ಅನಂತ ರೂಪವನ್ನ ಹೊತ್ತು......ಅನಂತ ಲೋಕಗಳನ್ನು .......ಅನಂತ ಬಣ್ಣಗಳಿಂದ ತುಂಬಿ.....ಅನಂತ ಭಕ್ತರ ....ಅನಂತ ಮನದಲ್ಲಿ.....ಅನಂತ ಚಿಂತನೆಯನ್ನ ತುಂಬಿ ....  ಅನಂತ ರೀತಿಯಾಗಿ.... ಅನಂತ ಸತ್ಕಾರ್ಯಗಳನ್ನು ಮಾಡಿಸುತಿದ್ದಾನೆ.....
ಅನಂತ ಜೀವಕ್ಕೂ..... ಅನಂತ ಭಾವನೆಗಳನ್ನ ತುಂಬಿ..... ಅನಂತವಾಗಿ.....ಅನ್ಥರ್ಯಾಮಿಯಾಗಿ ನಮ್ಮನಿಮೆಲ್ಲರೋಳಗಿದ್ದು ..... ನಮನ್ನ ಅನಂತ ನೆಡೆಗೆ ನಡೆಯಲು ಹುರಿದುಮ್ಬಿಸುತಿದ್ದಾನೆ....

      ಈಗ ನಾವು ನಮನ್ನೇ ಪ್ರಶ್ನಿಸಿಕೊಳ್ಳೋಣ......ಇಂತಹ ಅನಂತನಿಗಿಂತ ......ಅನಂತ ಹಿರಿಮೆಯನ್ನು  ಹೊಂದಿರ್ತಕ್ಕಂತ ಅತಿತಿ ನಿಮಗೆ ಎಲ್ಲಾದರೂ ಸಿಗುವ ಸಾಧ್ಯತೆ ಇದೆಯೇ???    ಇಂತಹ ಒಬ್ಬ ಅತಿತಿ  ನಿಮ್ಮ ಮನೆಗೆ ಬರುತ್ತಾನೆ ಅಂದ್ರೆ.....ನಿಮ್ಮ ಆತಿತ್ಯ ಏಷ್ಟು ಹಿರಿದಾಗಿರಬೇಕು ಅಂತ ನೀವೇ ಯೋಚನೆ ಮಾಡಿ.....

    ಇಂತಹ ವಿಶೇಷ ಅತಿತಿಯ .....ವಿಶೇಷ ಸಾನ್ನಿಧ್ಯವನ್ನ.....ವಿಶೇಷವಾಗಿ ಅನುಭವಿಸೋಕೆ ಅಂತಾನೆ.....ನಮ್ಮ ಹಿರೀಕರು.....ಹಬ್ಬ ಹರಿದಿನಗಳನ್ನ ಗುರುತಿಸಿರೋದು....

     ಪುರುಷೋತ್ತಮನಿಗೆ ...... ಉತ್ತಮ್ಮ ಸೇವೆ ಸಲ್ಲಿಸುವ ಸಲುವಾಗಿ....ಉತ್ತಮ ಯೋಗ.... ಉತ್ತಮ ಕರಣ......ಉತ್ತಮ ದಿನದಂದು.......ಉತ್ತಮ ಪದಾರ್ಥಗಳೊಂದಿಗೆ....ಉತ್ತಮ ಸಿದ್ದತೆಯೊಂದಿಗೆ ..... ಅನಂತನನ್ನ ಅನಂತ ಸಂತಸದಿಂದ ಬರಮಾಡಿಕೊಳ್ಳುವ ದಿನಗಳನ್ನೇ ಹಬ್ಬ ಹರಿದಿನ ಎಂದು ಗುರುತಿಸಿರೋದು ....

ಜೈ ಶ್ರೀ ರಾಮ್

Sunday, August 23, 2009

ಭಾವ ದ್ವೀಪ - ಭಾವನೆಗಳ ಸಿರಿಮನೆ

ಭಾವ ದ್ವೀಪ ....... ನನ್ನ ಭಾವನೆಗಳಿಗೆ ನೆಲೆ ಕೊಡಲು ಭಗವಂತ ಒದಗಿಸಿರುವ ಏಕೈಕ ದ್ವೀಪ ಈ ಜೀವನ.....ಕ್ಷಣ ಮಾತ್ರದಲ್ಲೇ ಹೊಳೆದ ಈ ಹೆಸರಿಗೆ ಕಾರಣ ಹಲವು.... ಆದರೆ ಅವುಗಳಲ್ಲಿ ಮುಖ್ಯವಾದವು.......ಪ್ರೀತಿ ಮತ್ತು ಸ್ನೇಹ .... ಸ್ಥೂಲ ದೃಷ್ಟಿಗೆ ಪ್ರೀತಿ ಸ್ನೇಹದಂತೆ.....ಸ್ನೇಹ ಪ್ರೀತಿಯಂತೆ ಕಂಡರೂ.....ಒಂದೇ ಅಲ್ಲ ಎಂಬುದು ನನ್ನ ಭಾವನೆ.....

ಸ್ನೇಹ ಅನ್ನೋದು ಈ ದ್ವೀಪಕ್ಕೆ ಆಗಾಗ ಬಂದು ಹೋಗೋ ದೋಣಿ ಇದ್ದ ಹಾಗೆ..... ನಮ್ಮ ಸ್ನೇಹಿತರು....ಈ ದೋಣಿ ಉಪ್ಯೋಗ್ಸೋ ಬೆಸ್ತರಿದ್ದ ಹಾಗೆ....ಪ್ರೀತಿ ಅನ್ನೋದು......ದ್ವೀಪದಲ್ಲಿ ಹರಡಿರೋ ಮರಳಿದ್ದ ಹಾಗೆ.....ಸ್ನೇಹ ಬಂದು ಬಂದು ಹೋಗ ಬಹುದು......ಆದ್ರೆ ಪ್ರೀತಿ ಒಂದು ಸರ್ತಿ ಬಂದ್ರೆ ಮತ್ತೆ ಹೋಗಲ್ಲ....

ಈ ಜೀವನವನ್ನ ದ್ವೀಪ ಅಂತ ಕರ್ಯೋಕೆ ಕಾರಣ ಏನ್ ಗೊತ್ತ???..... ನಮಗೆ ಜೀವನದಲ್ಲಿ ಸುಮಾರ್ ಜನ ಹತ್ರ ಆಗ್ತಾರೆ.....ಅಲ್ವಾ????.....ಆದ್ರೆ....ನಿಜವಾಗಲು ಹತ್ರ ಆಗೌರು ಎಷ್ಟು ಜನ???....ಬೆರಳೆಣಿಕೆ ಅಷ್ಟು ಮಾತ್ರ ಅಲ್ವಾ?
ಮುಂಚಿನ ಕಾಲದಲ್ಲೂ ಹೀಗೆ......ದ್ವೀಪ ಸೇರೋಕೆ....ತುಂಬ ಜನ ಪ್ರಯತ್ನ ಪಡೌರು.....ಆದ್ರೆ ಸೇರ್ತಿದ್ದೌರು....ಬೆರಳೆಣಿಕೆಯಷ್ಟು ಮಾತ್ರ...
ಸ್ನೇಹ ಅನ್ನೋ ದೋಣಿ ಹತ್ತಿ......ಭಾವನೆ ಆನೋ ಹರಿಗೋಲ್ ಹಿಡಿದು ....... ಮನಸ್ಸಿಗೆ ಹತ್ರ ಅಗೌರ್ ಅಷ್ಟೆ ಸ್ನೇಹಿತರು.... ಮಿಕ್ಕಿದವರೆಲ್ಲ ಸಮಯ ಸಾಧಕರು... :) ..ಏನ್ ಅಂತೀರಿ?..... ನಿಜ ಅಲ್ವಾ?......
ಪ್ರೀತಿ ಕೂಡ ಒಂದು ರೀತಿ ಹೀಗೆ.......ಒಂದು ದ್ವೀಪದ ಮೇಲೆ,....ಹಲವಾರು ರೀತಿಯ ಮರಳು ಇರುತ್ತೆ......ಜೀವನದಲ್ಲಿ ಕೂಡ ಹಾಗೆ....ಹಲವಾರು ರೀತಿ ಪ್ರೀತಿಯಾ ರೂಪಗಳು ......ಅಮ್ಮನ ಪ್ರೀತಿ....ಅಪ್ಪನ ಪ್ರೀತಿ......ತಂಗಿಯ ಪ್ರೀತಿ.....ಹೆಂಡತಿಯ ಪ್ರೀತಿ....ಸ್ನೇಹಿತರ ಪ್ರೀತಿ.....ಹೀಗೆ ..... ಹಲವಾರು...... :)..... ಆದ್ರೆ ಎಲ್ಲವು ಬೇರೆ ಬೇರೆ ಮುಕಗಲ್ಲನ್ನು ಹೊತ್ತಿರುವ ಒಂದೇ ಪ್ರೀತಿ.... ಪ್ರೀತಿಗೆ ಚೈತನ್ಯ ತರತಕ್ಕಂತ ವಸ್ತುವೇ ಭಾವ.....
.......ಭಾವವಿರದ ಬದುಕು.....ಬಣ್ಣವಿಲ್ಲದ ಲೋಕವಿದ್ದ ಹಾಗೆ ......... ಊಹಿಸೋದು ಕಷ್ಟ ಅಲ್ವಾ?......
so......the communication between the land of unkown and a known island of life, is through the boats of friendship and the words of wisdom.........
Many islands can be brought together through the sand of love...... This land formed out of many islands can be a primary source of shelter to many unkonwn orphan islands.......
'ಹಡಗು ನಿನ್ನದೇ ಕಡಲು ನಿನ್ನದೇ ಮುಳುಗದಿರಲಿ ಬದುಕು'........' ದೀಪವು ನಿನ್ನದೇ ಗಾಳಿಯು ನಿನ್ನದೇ ಆರದಿರಲಿ ಬೆಳಕು'
ಮೈಸೂರು ಮಲ್ಲಿಗೆಯ ಈ ಮಾತು .... ಹೊರ ನೋಟಕ್ಕೆ ಎಷ್ಟು ಸರಳವೋ....ಒಳ ನೋಟಕ್ಕೆ....ಅಷ್ಟೆ ಭಾವಪೂರ್ವಕ ....
ಪ್ರೀತಿ ಮತ್ತು ಸ್ನೇಹವೆಂಬ ಎರಡು ಅಪೂರ್ವ ಮುತ್ತುಗಳನ್ನ ....ಕಾಪಾಡಿಕೊಳ್ಳಿ......ಬದುಕನ್ನು ಭಾವಪೂರ್ವಕವಾಗಿರಿಸಿ....
ಇದು ನನ್ನ ವಯಕ್ತಿಕ ಪ್ರಾರ್ತನೆ.... :)

Search This Blog